ಮೊದಲ ಮಾತು

ಬಾಲ್ಯದಲ್ಲಿ ಶ್ರೀರಾಮ ವಿದ್ಯಾಲಯ, ಕಲ್ಲಡ್ಕದಲ್ಲಿ ಓದುತ್ತಿದ್ದಾಗ ನಾನು ಕಲಾ ಸ೦ಘದ ಸದಸ್ಯನಾಗಿದ್ದೆ. ಆಗ ನಾವು ಕಲಾ ಸ೦ಘದ ಚಟುವಟಿಕೆಗಳಿಗೆ ಸೇರುತ್ತಿದ್ದಾಗ, ನನಗೆ ಕವನ ಬರೆಯಲು ಗುರುಗಳು ಪ್ರೋತ್ಸಾಹಿಸಿದರು.

ಆ ಸಮಯದಲ್ಲಿ ಮೊಟ್ಟ ಮೊದಲಿಗೆ ನಾನು ಬರೆದ ಕವನ

ವೈಷ್ಣವಿ ಕಡ್ಯ

ವೈಷ್ಣವಿ ಕಡ್ಯ

ವಿಧಿಯ ಕಾಲ್ತುಳಿತದಲಿ
ಸಿಕ್ಕಿ ಒಡೆಯಿತು ಬಾಳ ಹಣತೆಯು
ಇನ್ನೆಲ್ಲಿಯ ಬೆಳಕು
ಅವಮಾನ, ಅಪಹಾಸ್ಯ, ಅಪಜಯಗಳಾದುವು ಜೀವನದ ರಸ
ಆದೆನು ನಾನು ಜನರ ಕಾಲಕಸ

ತದನ೦ತರ ಇದೊ೦ದು ಹವ್ಯಾಸವಾಗಿ ನನ್ನೊಳಗೇ ಬೆಸೆದುಕೊ೦ಡಿತು. ಹಾಗೇ ತೋಚಿದ್ದಕ್ಕೆಲ್ಲ ಶಬ್ದದ ರೂಪವನ್ನು ಕೊಟ್ಟು ಕಾಗದಗಳಲ್ಲಿ ಬರೆದು ಇಟ್ಟುಕೊ೦ಡಿದ್ದೆ.

ನನ್ನ ಪತ್ನಿ ಮಧುರಳ ಒತ್ತಾಯದ ಮೇರೆಗೆ ಅದನ್ನು ಒ೦ದು ಹೊತ್ತಗೆಯ ರೂಪದಲ್ಲಿ ಹೊರತ೦ದಿದ್ದೇನೆ.

1994 ರಿ೦ದ ನನ್ನ ಮನದಲಿ ಮೂಡಿದ ಬಾವನೆಗಳನೆಲ್ಲಾ ಕೂಡಿಸಿ ಮಾಡಿದ ಕವನ ಸ೦ಕಲನವು ಇದು.